ವಿವೇಕ ಶಾನಭಾಗ
ಕನ್ನಡದ ಪ್ರಮುಖ ಕತೆಗಾರರಲ್ಲಿ ವಿವೇಕ ಶಾನಭಾಗ ಅವರು ಒಬ್ಬರು. ಹೊಸ ಬಗೆಯ ಕಥೆ ಕಟ್ಟುವ, ಸಣ್ಣ ಊರು ಅಥವಾ ವಿಶಾಲ ಜಗತ್ತುಗಳೆರಡರಲ್ಲಿಯೂ ಮನುಷ್ಯರ ಮನಸ್ಸಿನ ಆಯಾಮ ಗುರುತಿಸಬಲ್ಲ ಬರಹಗಾರ. ಅವರ ‘ಘಾಚರ್ ಘೋಚರ್ ನೀಳ್ಗತೆಯ ಇಂಗ್ಲಿಷ್ ಅನುವಾದ ಜಗತ್ತಿನ ಸಾಹಿತ್ಯ ವಲಯದ ಗಮನ ಸೆಳೆದಿದೆ. ಲಂಡನ್, ಅಮೆರಿಕಗಳಲ್ಲಿ ಪ್ರತ್ಯೇಕ ಆವೃತ್ತಿ ಕಂಡಿರುವ ಈ ಕೃತಿ ಜಗತ್ತಿನ 18 ಭಾಷೆಗಳಿಗೆ ಅನುವಾದಗೊಂಡು ಮಚ್ಚುಗೆ ಗಳಿಸಿದೆ. ಗರು, ಹುಲಿ ಸವಾರಿ, ಮತ್ತೊಬ್ಬನ ಸಂಸಾರ ಸಣ್ಣಕತೆಗಳ ಸಂಕಲನಗಳಾದರೆ, ಇನ್ನೂ ಒಂದು, ಊರುಭಂಗ, ಸಕೀನಾಳ ಮುತ್ತು ಪ್ರಕಟಿತ ಕಾದಂಬರಿಗಳು. ಬಣ್ಣದ ಗೊಂಬೆ, ಇಲ್ಲಿರುವುದು ಸುಮ್ಮನೆ ನಾಟಕಗಳನ್ನು ಪ್ರಕಟಿಸಿದ್ದಾರೆ. ‘ದೇಶಕಾಲ‘ ಎಂಬ ಸಾಹಿತ್ಯಕ ಪತ್ರಿಕೆಯ ಸಂಪಾದಕರೂ ಆಗಿದ್ದಾರೆ.