ಉತ್ತರ ಕನ್ನಡ ಜಿಲ್ಲೆ ಧಾರೇಶ್ವರ ಶ್ರೀಪಾದ ಭಟ್ ಅವರ ಜನ್ಮ ಭೂಮಿ. ಕನ್ನಡ ರಂಗಭೂಮಿಯಲ್ಲಿ ಹೆಸರುವಾಸಿಯಾಗಿರುವ ಶ್ರೀಪಾದ ಭಟ್ ಅವರು, ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಎರಡೂ ರಂಗಗಳಲ್ಲಿ ನುರಿತ ಸಾಧಕ. ರಂಗ ಭೂಮಿಯಲ್ಲಿ ಶ್ರೀಪಾದ ಭಟ್ ನಡೆಸಿದ ಪ್ರಯೋಗಗಳು ಹೆಸರುವಾಸಿ. ಗಾಂಧಿ-150 ಸಂದರ್ಭ ಇವರು ನಿರ್ದೇಶಿಸಿದ ಪಾಪು-ಬಾಪು ನಾಟಕ, ಎರಡು ಸಾವಿರ ಪ್ರಯೋಗಗಳನ್ನು ಕಂಡಿದೆ. ಇದುವರೆಗೂ ಸುಮಾರು 150ಕ್ಕೂ ಹೆಚ್ಚು ನಾಟಕಗಳನ್ನು ಶ್ರೀಪಾದ ಭಟ್ ನಿರ್ದೇಶಿಸಿದ್ದಾರೆ. ರಂಗಭೂಮಿ ಕುರಿತ ಅಧ್ಯಯನಕ್ಕೆ ಪಿಎಚ್‌ಡಿ ಪದವಿಯನ್ನೂ ಪಡೆದಿದ್ದಾರೆ.